Monday, May 15, 2006

mothers day

much to my good luck the radio division of SBS - Special Broadcasting Service in Australia broadcasts a kannada programme every sunday between 5 & 6 pm. sometimes i have the opportunity to present my bits on it. i spoke on mothers day yesterday. i thought of mom and how much i am missing her and began writing. she inspired me to write this piece. this is the result of her 'spoorti'. this is for her. once i procure the audio file, will upload it here provided technology doesnt get the better of me! till then, this is what i had to say:


ನಮಸ್ಕಾರ, ಇಂದು Mothers' Day! ಎಲ್ಲಾ ತಾಯಿಯರಿಗೂ ಹಾರ್ದಿಕ ಶುಭಾಶಯಗಳು.

मात्रु दॆवॊभव पित्रु दॆवॊभव आचार्य दॆवॊभव अतिथि दॆवॊभव
ಅನ್ನೋ ವೇದವಾಕ್ಯ ಇದೆ. ಅದನ್ನು ನಾವೆಲ್ಲಾ ಕಲಿತಿದ್ದೇವೆ. ತಾಯಿಯೇ ದೇವರು. ತಂದೆ ದೇವರು. ಆಚಾರ್ಯ, ಪಾಠ ಹೇಳಿಕೊಟ್ಟ ಗುರು ದೇವರು. ಮನೆಗೆ ಬಂದ ಅತಿಥಿ ದೇವರು. ಆದರೆ ಎಲ್ಲರಿಗಿಂತ ಮೊದಲು, ಮೊಟ್ಟಮೊದಲ ಸ್ಥಾನದಲ್ಲಿ "ಮಾತೃ ದೇವೋಭವ" ಎಂದಿದ್ದಾರೆ. ತಾಯಿಯಿಂದಲ್ಲವೇ ಉಸಿರು? ಅವಳಿಂದಲೇ ಜೀವ. ಅವಳಿಂದಲೇ ಮೂಲ.

ನಮ್ಮಲ್ಲಿ ಕೆಲವು ಜನ ಕೇಳ್ತಾರೆ - "ಇದೇನ್ರೀ ಇದು? ಈ Mothers Day ಅಂತೆ, Fathers Day ಅಂತೆ, Valentines Day ಅಂತೆ. ಸಿಕ್ಕಿದ್ದಕ್ಕೆಲ್ಲಾ ಒಂದು `ಡೇ' ಕಣ್ರೀ. ಸಂಕ್ರಾಂತಿ, ಯುಗಾದಿ, ಗಣೇಶನ ಹಬ್ಬ, ದೀಪಾವಳಿಗಳಂಥ ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸೋದು ಬಿಟ್ಟು, ಇದೇನು ಹುಚ್ಚು? ಇದೆಲ್ಲಾ ವಿದೇಶೀ ಸಂಸ್ಕೃತಿ. ನಮ್ಮದಲ್ಲ. ಇಲ್ಲದ ಆಡಂಬರ" ಅಂತ.

ಒಂದು ರೀತಿಯಲ್ಲಿ ಇದು ನಿಜ. ಆದರೆ ನನ್ನ ವಾದ ಏನಪ್ಪ ಅಂದ್ರೆ - ಕಣ್ಣಿಗೆ ಕಾಣದೇ ಇರೋ ಎಷ್ಟೋ ದೇವರುಗಳನ್ನು, ಎಣಿಕೆಗೆ ಸಿಗಲಾರದಷ್ಟು ದೇವರುಗಳನ್ನು ಪೂಜಿಸುತ್ತೇವೆ. ನಮ್ಮ ಎದುರಿಗೇ ಇರೋ ಪ್ರತ್ಯಕ್ಷವಾದ ತಾಯಿ ದೈವವನ್ನು ಆರಾಧಿಸಲು ಒಂದು ದಿನವಾದರೂ ಬೇಡವೇ?

ಇತಿಹಾಸ:
ಈ Mothers Day ಹೇಗೆ ಶುರು ಆಯಿತು? ಎಲ್ಲಿಂದ ಇದರ ಆರಂಭ? ಈ ದಿನದ ಇತಿಹಾಸದ ಮೇಲೆ ಗಮನ ಹಾಯಿಸಿದರೆ ತಿಳಿದು ಬರತ್ತೆ - ವಿವಿಧ ದೇಶಗಳಲ್ಲಿ ಅವರವರ ಸಂಸ್ಕೃತಿಗೆ ತಕ್ಕಂತೆ ವಿವಿಧ ಪ್ರಕಾರಗಳಲ್ಲಿ ಈ Mothers Day ಆಚರಣೆ ನಡೆಯುತ್ತಿತ್ತು.

ಪುರಾತನ Greekಅರು ದೇವತೆಗಳ ತಾಯಿ Rhea ದೇವಿಯನ್ನು ಆರಾಧಿಸಲು ರಜಾ ದಿನವಾಗಿ ಈ ದಿನವನ್ನು ಆಚರಿಸುತ್ತಿದ್ದರು. ಪ್ರಾಚೀನ Roman ನ್ನರು ತಾಯಿ ದೇವತೆ Cybeleಲಳ ಗೌರವಾರ್ಥ Mothers Day ಆಚರಿಸುತ್ತಿದ್ದರು. ಇನ್ನು Britainನಲ್ಲಿ ೧೭ನೇ ಶತಮಾನದಲ್ಲಿ Mothering Sunday ಅನ್ನೋ ಸಂಪ್ರದಾಯ ಶುರು ಆಯಿತು. Lent ಕಾಲದ ನಾಲಕ್ಕನೇ ಭಾನುವಾರದಂದು ಈ Mothering Sunday ಆಚರಣೆ ನಡೆಯುತ್ತಿತ್ತು. ಎಲ್ಲಾ ಕಾರ್ಮಿಕರು, ಆಳುಗಳು ತಮ್ಮ ತಾಯಂದಿರನ್ನು ಭೇಟಿ ಮಾಡಲು ಅಂದು ಮನೆಗೆ ಹೋಗುತ್ತಿದ್ದರು. ೧೯ನೇ ಶತಮಾನದಲ್ಲಿ ಈ ರಜಾ ದಿನದ ವಾಡಿಕೆ ಸಂಪೂರ್ಣ ಮರೆಯಾಗಿ ಹೋಯಿತು.

ನಮಗೆ ಈ ಹಳೆಯ ಇತಿಹಾಸದ ನಂತರ Mothers Day ಬಗ್ಗೆ ಹೆಚ್ಚು ಮಾಹಿತಿ ದೊರೆಯುವುದು 1858 ರಲ್ಲಿ, ಅಮೇರಿಕಾದ West Virginia ರಾಜ್ಯದಲ್ಲಿ.
Anna Reeves Jarvis ಎಂಬ ಅಧ್ಯಾಪಕಿ ಪೌರ ಸಮರದ ಕಾಲದಲ್ಲಿ, ಅಂದರೆ Civil War ಸಮಯದಲ್ಲಿ, ತನ್ನ ಊರಿನ ನೈರ್ಮಲ್ಯವನ್ನು ಸುಧಾರಿಸಲು Mothers Work Days ಅನ್ನೋ ಚಳುವಳಿಯನ್ನು ಆರಂಭಿಸಿದರು.
ಆನಂತರ Julia Ward Howe ಎಂಬ ಮಹಿಳೆ 1872 ರಲ್ಲಿ ಶಾಂತಿ, ತಾಯ್ತನ ಹಾಗೂ ಸ್ತ್ರೀತ್ವಗಳನ್ನು ಗೌರವಿಸಲು ಜೂನ್ ೨ರಂದು Mothers Day for Peace ಅಂತ ಆಚರಿಸುವ ರೂಢಿ ಕಾರ್ಯರೂಪಕ್ಕೆ ತಂದರು. ಸುಮಾರು ಹತ್ತು ವರ್ಷಗಳ ಕಾಲ ಈ Mothers Day for Peace ಆಚರಣೆ ನಡೆಯಿತು. ಆದರೆ ಕ್ರಮೇಣ ಖರ್ಚು ವೆಚ್ಚಗಳನ್ನು ಪೂರೈಸಲಾಗದೆ ಮರೆಯಾಯಿತು.
ನಂತರ 1908 ರಲ್ಲಿ Anna Reeves Jarvis ರವರ ಮಗಳಾದ, ಅದೇ ಹೆಸರಿನ, Anna Jarvis ರವರು Mothers Dayಯನ್ನು ಅಧಿಕೃತವಾಗಿ ಸ್ಥಾಪಿಸಲು ಕೆಲಸ ನಡೆಸಿದರು. ಆಮೇರಿಕಾದ ಸರ್ಕಾರ ಮಸೂದೆಯನ್ನೂ ಸಹ ಅಂಗೀಕರಿಸಿತು.

ಈಗ Mothers Dayಗೆ ಅಂತರರಾಷ್ಟ್ರೀಯ ಸ್ಥಾನ ದೊರೆತಿದೆ. ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಿಯರ ದಿನವೆಂದು United States, Denmark, Finland, Italy, Turkey, Australia, Belgium ಹಾಗೂ ಇನ್ನಿತರ ದೇಶಗಳಲ್ಲಿ ಆಚರಿಸುತ್ತಾರೆ. Britain ನಲ್ಲಿ ಮೊದಲೇ ಹೇಳಿದಂತೆ ಲೆಂಟ್ ಕಾಲದ ನಾಲ್ಕನೇ ಭಾನುವಾರದಂದು Mothers Day. Spain ನಲ್ಲಿ ಡಿಸೆಂಬರ್ ೮ ರಂದು Feast of the Immaculate ಅನ್ನೋ ಆಚರಣೆ. France ನಲ್ಲಿ ಮೇ ತಿಂಗಳ ಕೊನೆಯ ಭಾನುವಾರದಂದು ಹೂವಿನಗುಚ್ಛದ ಆಕೃತಿಯ ವಿಶೇಷ Cake ಅನ್ನು ತಾಯಿಯರಿಗೆ ಭೇಟಿ ನೀಡುತ್ತಾರೆ.

Women's International League for Peace and Freedom ಹಾಗೂ Women's Action for Nuclear Disarmament ನಂತಹ ಸಂಸ್ಥೆಗಳು ಅಣುತಂತ್ರದ ವಿರುದ್ಧ "The Million Mom March" ಅನ್ನೋ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಾರೆ. ಇವಿಷ್ಟೂ Mothers Day ಇತಿಹಾಸ, ವಾಸ್ತವಾಂಶಗಳು.

ಜನನ-ಜೀವನ:
ನವ ಮಾಸಗಳು ಹೊತ್ತು ಹೆರುತ್ತಳೆ. ಹೆರಿಗೆಯಿಂದ ಶಿಶುವಿಗೆ ಜನ್ಮ. ಆ ಹೆರಿಗೆಯ ನೋವು ಅನುಭವಿಸಿ ಗೆದ್ದು ಬರುವ ತಾಯಿಗೆ ಮರುಜನ್ಮ ಅಂತ ಹೇಳಿದರೆ ಅತಿಶಯೋಕ್ತಿ ಅಲ್ಲ. ಶಿಶುವಿಗೆ ಜೀವ ನೀಡಿದ ಮೇಲೆ ಶಿಶುವೇ ಅವಳ ಜೀವ. ಆ ಕಂದನಿಗೆ ಹಾಲುಣಿಸಿ ಪೋಷಿಸುತ್ತಾಳೆ. ಅದನ್ನು ಎತ್ತಿ, ಆಡಿಸಿ, ಬೆಳೆಸುವ ಹಾದಿಯಲ್ಲಿ - ಮಗು ನಕ್ಕರೇ ಸಾಕು ಅವಳಿಗೆ ಸ್ವರ್ಗ, ಒಂದು ಕ್ಷಣ ಮಗುವಿಗೆ ನೋವಾದರೂ ತನಗೇ ನೋವಾದಷ್ಟು ಹೇಳಲಾರದ ಸಂಕಟ.

ತಾಯಿಗೆ ಅನೇಕ ರೂಪಗಳು. ಅನೇಕ ಜವಾಬ್ದಾರಿಗಳು.
ಮಗುವಿಗೆ ಮನೆಯಲ್ಲೇ ಪಾಠ ಕಲಿಸುವ ಮೊದಲ ಶಿಕ್ಷಕಿ ಅವಳು. ಬಿದ್ದು ಗಾಯ ಮಾಡಿಕೊಂಡು ಮನೆಗೆ ಬಂದು `ಅಮ್ಮಾ' ಅಂತ ಕೂಗಿದರೆ ಸಾಕು, ಓಡಿ ಬಂದು ಶುಶ್ರೂಷೆ ಮಾಡುವ ವೈದ್ಯ ಅವಳು. ಅತ್ತಾಗ ಕಣ್ಣು ಒರೆಸುವವಳು. ಮಗುವಿನ ಆಟ, ಓಟ, ಏಳಿಗೆಗಳನ್ನು ಕಂಡು ಹಿಗ್ಗುವವಳು. ಶಾಲೆಯಿಂದ ದಣಿದು ಮನೆಗೆ ಬಂದಾಗ ರುಚಿಯಾದ ತಿಂಡಿ ಕೊಟ್ಟು ಉಪಚರಿಸುವ ಪೋಷಕಿ ಅವಳು. ಮಕ್ಕಳಿಗೆ ಪರೀಕ್ಷೆ ಎಂದರೆ ತಾಯಿಗೆ ಮಹಾಪರೀಕ್ಷೆ. ಅವರನ್ನು ಓದಿಸುವುದು, ನಿದ್ದೆಗೆಡುವುದು, ಉಪಚರಿಸುವುದು - ಅಬ್ಬಬ್ಬಾ! ಒಂದೇ, ಎರಡೇ ಅವಳ ಕೆಲಸಗಳು?
ಇನ್ನು ಹದಿಹರೆಯ ವಯಸ್ಸಿನಲ್ಲಿ - ಸೂಕ್ಶ್ಮವಾದ teenage years ನಲ್ಲಿ ತಾಯಿ ಮಾರ್ಗದರ್ಶಿ ಆಗ್ತಾಳೆ. ಎಲ್ಲಾ ವಿಷಯಗಳನ್ನೂ ಅವಳ ಹತ್ತಿರ ಮನ ಬಿಚ್ಚಿ ಹೇಳಿಕೊಳ್ಳಬಹುದು. ಮಕ್ಕಳು ತನ್ನ ಹತ್ತಿರ ಹೇಳಿಕೊಳ್ಳದೇ ಮುಚ್ಚಿಟ್ಟ ಎಲ್ಲಾ ವಿಷಯಗಳು ಆಕೆಗೆ ತಿಳಿದೇ ಇರತ್ತೆ! ಅವಳು ಮಕ್ಕಳ ಅಂತರ್ಯಾಮಿ. ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಆಕೆಯೇ counsellor. ಜೀವನ ಸಾಗಿದಂತೆ ಅವಳೇ Role Model - ಆದರ್ಶ ವ್ಯಕ್ತಿ ಆಗ್ತಾಳೆ.

M for Mother:
ನೀವು ಗಮನಿಸಿರಬಹುದು. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ತಾಯಿಯನ್ನು ಕರೆಯುವ ಪದದಲ್ಲಿ "ಮ" ಅಕ್ಷರ ಇದ್ದೇ ಇರತ್ತೆ. ಕನ್ನಡದಲ್ಲಿ `ಅಮ್ಮ', ತೆಲುಗುನಲ್ಲಿ `ಅಮ್ಮು, ಅಂಬ', ಹಿಂದಿಯಲ್ಲಿ `मा', English ನಲ್ಲಿ `mom, mummy, mamma', Spanish ಹಾಗೂ Italian ನಲ್ಲಿ `Madre', French ನಲ್ಲಿ `Mere'.
ಮಗುವಿಗೆ ಮಾತು ಕಲಿಯುವ ವಯಸ್ಸಿನಲ್ಲಿ `ಮ' ಅಕ್ಷರ ಸುಲಭವಾಗಿ ಉಚ್ಛರಿಸುವ ಅಕ್ಷರ. ಎಷ್ಟೋ ಮಕ್ಕಳು ಮೊದಲು ಕಲಿಯುವ ಪದವೇ `ಅಮ್ಮಾ'. ಈಗಲೂ ನಾವು ದಿನನಿತ್ಯ ಮಾತನಾಡುವಾಗ "ಅಯ್ಯೋ, ಅಮ್ಮಾ ಕಾಲು ನೋವು" ಅಂತೀವಿ. ಕಷ್ಟದಲ್ಲಿ, ನೋವಿನಲ್ಲಿ ನಾವು ಮೊದಲು ಕೂಗುವುದು; ಮೊದಲು ಜ಼ಾಪಿಸಿಕೊಳ್ಳುವುದು ಅಮ್ಮನನ್ನು.

God created mother to fill his absence
ಅಂತಾರೆ. ತಾಯಿಯ ಪಾತ್ರ ಮಗುವಿನ ಬೆಳವಣಿಗೆಯಲ್ಲಿ, ಆ ಮಗು ಬೆಳೆದು ಸತ್ಪ್ರಜೆ ಆಗುವುದರಲ್ಲಿ ಅತಿ ಮುಖ್ಯವಾದದ್ದು. ಅವಳೇ ಆಧಾರ ಸ್ಥಂಭ. ಅವಳ ಪ್ರೀತಿ, ಆರೈಕೆ, ಮಮತೆ ಹಾಗು ಪೋಷಣೆ ಮಗುವಿನ ವ್ಯಕ್ತಿ ವಿಕಸನದಲ್ಲಿ ಬೆನ್ನೆಲುಬುಗಳು. ತನ್ನ ಮಗುವಿಗೆ, ತನ್ನ ಮನೆಗೆ ಅವಳು ತನ್ನ ಇಡೀ ಜೀವನ ಮುಡಿಪಾಗಿಟ್ಟು, ಹಗಲೂ ರಾತ್ರಿ ಸಂಸಾರದ ಚಕ್ರವನ್ನು ಮುನ್ನಡೆಸುತ್ತಾಳೆ. ತಾಯಿ ತ್ಯಾಗಮಯಿ. ಮನೆ, ಮನಗಳನ್ನು ಬೆಳಗುವ ದೀಪ ಅವಳು.

ಈ ನಮ್ಮ ಅಚ್ಚುಮೆಚ್ಚಿನ ಅಮ್ಮನನ್ನು ನಾವು ಹಲವು ಬಾರಿ ಮರೆಯುವುದೂ ಉಂಟು. ಅಮ್ಮ ಅಂದರೆ ಸಲಿಗೆ ಜಾಸ್ತಿ. ಮುದ್ದು ಜಾಸ್ತಿ. ಕೆಲವೊಮ್ಮೆ ಅವಳನ್ನ ನಾವು ನಿರ್ಲಕ್ಷಿಸುವುದು ನಿಜ. "taken for granted" ಅಂತಾರಲ್ಲ ಹಾಗೆ. ನಮ್ಮ ಒಲವನ್ನು ತೋರಿಸಲು Mothers Day ಅನ್ನೋ ಪ್ರತ್ಯೇಕವಾದ ದಿನ ಬೇಕಾಗಿಲ್ಲ. ಆದರೆ ನಮ್ಮಲ್ಲಿ ಎಷ್ಟು ಜನ ತಾಯಿಯನ್ನು ಅಪ್ಪಿಕೊಂಡು ಪ್ರೀತಿ ಮಾತನಾಡುತ್ತೇವೆ? ನೀವು ನಿಮ್ಮ ತಾಯಿಯನ್ನು ವಿಶೇಷವಾಗಿ ಅಭಿನಂದಿಸಿದ್ದು ಜ಼ಾಪಕವಿದೆಯೇ? ಬಹಳ ದಿನ ಆಗಿದೆ ಅಲ್ವೇ? ಅದಕ್ಕೇ ಈ Mothers Day.

जननी जन्मभूमिश्च स्वर्गादपि गरीयसि ಅಂತಾರೆ. ಜನನಿಗೆ ಹಾಗೂ ಜನ್ಮಭೂಮಿಗೆ ಸ್ವರ್ಗಕ್ಕಿಂತಲೂ ಮಿಗಿಲಾದ ಸ್ಠಾನ. ನಮ್ಮಲ್ಲಿ ಎಷ್ಟೋ ಜನ ಜನನಿಯಿಂದ, ಜನ್ಮಭೂಮಿಯಿಂದ ದೂರ ವಲಸೆ ಬಂದು Australia ದಲ್ಲಿ ನೆಲೆಸಿದ್ದೇವೆ. ಬನ್ನಿ ಈ ದಿನ ಆ ಜನನಿಗೆ, ಪ್ರೀತಿಯ ಅಮ್ಮನಿಗೆ, ಆ ಮಹಾ ತಾಯಿಗೆ ನಮ್ಮ ಕೃತಜ಼ತೆ, ನಮ್ಮ ಒಲವನ್ನು ತೋರಿಸೋಣ. ಒಂದು ಹೂಗೊಂಚಲಾದರೂ ಸಾಕು. ಅಥವಾ ಒಂದು ಶುಭಾಶಯ ಪತ್ರವೋ ಇಲ್ಲ ಒಂದು ದೂರವಾಣಿ ಕರೆಯೋ, ಯಾವುದಾದರೂ ಸರಿ. ಅವಳಿಗೆ ತನ್ನ ಮಕ್ಕಳು ಏನೇ ಮಾಡಿದರೂ ಪ್ರಿಯ.

ಮತ್ತೊಮ್ಮೆ ಎಲ್ಲಾ ತಾಯಿಯರಿಗೂ Mothers Day ಶುಭಾಶಯಗಳು.

7 Comments:

At 1:35 PM, Blogger direkishore said...

wow! multi-lingual blog :)
Congratulations on being able to voice your views and a tribute over the radio on such a lovely topic!

 
At 1:41 PM, Blogger Shubha said...

hey shiv! i feel victorious now! finally was able to achieve this technical feat. thank you for your kind words. that was express quick too, i was still editing!

 
At 7:06 AM, Blogger Soumya said...

Very nicely written Shubha...The script in kannada & hindi is so clear...Must have needed tremendous effort...
Wonderful words on a wonderful subject...
Can I still find the audio file in sbs archives??

 
At 11:39 AM, Blogger Shubha said...

thanx soum! yes, baraha took its toll on me. but the excitement of completing it & doing it without typos or errors was palpable!

sorry, SBS would now be updated with the latest prog (last sunday's). and dont think they have archived it either. i have an audio file - when the prog was aired, ravi recorded it on his mobile. its a massive file. will post it here ASAP.

 
At 3:20 AM, Blogger Enigma said...

good reda

 
At 10:31 AM, Blogger Shubha said...

thanx enigma! will give your nanna kathegalu a read soon...

 
At 6:49 PM, Blogger ybr (alias ybrao a donkey) said...

Good Progress. But all this may become empty. Kindly read
Bhartruhari's Vairagya Satakam.
www.bhartruhariyb.blogspot.com

 

Post a Comment

<< Home